ಬೆಂಗಾಡ ಬಿಸಿಲಿನಲಿ ಬೆಂದ,
ಸಂಜೆಯಾ ತಂಪಿನಲಿ ತೇಲಿರುವ ಭಾವಗಳೆ..
ಕಾಡದಿರಿ,ಬಾಡದಿರಿ, ರಾತ್ರಿಯಾಗಿಹುದೆಂದು.
ಮುಗ್ದತೆಯ ಮನಸಿನಲಿ ಮೂಡಿರುವ ನೀವು,
ದಗ್ದತೆಯ ಆಳವನು ಕೆದಕದಿರಿ ಇಂದು,
ಭಾಂದವ್ಯದ ಹೆಸರಿನಲಿ ಬಂದಿಸಿದ ಮನವೇ..
ತಣಿಸುವುದು ನಿಮ್ಮನ್ನು ಒಲವ ಧಾರೆಯ ಸುರಿದು.
ಹೊದೆಯಿರಿ ಬೆಚ್ಚನೆಯ ಭರವಸೆಯ ಹೊದಿಕೆ,
ಬೇಡ ನಿಮಗೆ ಇಂದೇ ಎಲ್ಲಾ ಸಾಧಿಸುವ ಬಯಕೆ,
ನಗುತಿಹನು ಚಂದ್ರಮನು..ನೋಡಿ ನಿಮ್ಮ ಅಸಹಾಯಕತೆ..
ಮಲಗಿ ಸುಮ್ಮನೆ,ಇರಲಿ ನಿಮ್ಮೊಳಗೆ ಆ ನಾಳೆಯಾಗುವದೆಂಬ ನಂಬಿಕೆ.
Good one.. :)
ReplyDeleteಶೋಭಾ,
ReplyDeleteತುಂಬಾ ಸುಂದರವಾಗಿದೆ,
ತೆಲಿರುವ,ರಾತ್ರಿಯಗಿಹುದೆಂದು,ನೊಡಿ
ಇದರಲ್ಲಿ ಕನ್ನಡ ದೋಷವಿದೆ,
ಸಾದ್ಯವಾದರೆ ಸರಿ ಪಡಿಸಿ
ಕವನದ ಆಶಯ ತುಂಬಾ ಇಷ್ಟವಾಯಿತು
ಚೆನ್ನಾಗಿದೆ..
ReplyDeleteಶೋಭಾ ಮೇಡಂ,
ReplyDeleteನಿಮ್ಮ ಬ್ಲಾಗ ನೋಡಿದೆ
ಭಾವಗಳ ಬಗ್ಗೆ ಬರೆದ ಕವಿತೆ ಸೋಗಸಾಗಿದೆ
ಬಿಡಿವಿದ್ದಾಗ ನಿಮ್ಮೆಲ್ಲಾ ಬರಹಗಳನ್ನು ಓದುವೆ
ಧನ್ಯವಾದಗಳು
ತುಂಬಾ ಚೆನ್ನಾಗಿದೆ...
ReplyDeleteನಿಮ್ಮವ,
ರಾಘು.
what's up madam, it's been a while since you've last posted here!!
ReplyDeleteSuper aag bardideera nodree...........
ReplyDeleteತುಂಬಾ ಚೆನ್ನಾಗಿದೆ. ಭಾವಗಳ ನಿಜವಾದ ಸ್ವರೂಪವಿದೆ.
ReplyDeleteಬಾವಾತಂಕವು ನಿಜವಾದ ಆತಂಕವನ್ನು ಸೃಷ್ಠಿ ಮಾಡುತ್ತದೆ.
ಅವಳ(ಅಥವಾ ಅವನ) ಭಾವಗಳು ಅದೆಷ್ಟು ಕ್ರೂರಿಯಾಗಿರಬಹುದು..?
"ಕಾಡದಿರಿ" ಎಂದು ಕೇಳಿಕೊಂಡು, ಕಡೆಗೆ ಅವುಗಳಿಗೇ ಭರವಸೆಯ ಮಾತುಗಳನ್ನಾಡಿ ಸುಮ್ಮನಾಗಿಸುವುದು.. ಮೆಚ್ಚತಕ್ಕ ಕಲ್ಪನೆ..!