Tuesday, November 24, 2009

ಭಾವಾತಂಕ !!

ಮುಂಜಾವ ಮಂಜಿನಲಿ ಮಿಂದ,
ಬೆಂಗಾಡ ಬಿಸಿಲಿನಲಿ ಬೆಂದ,
ಸಂಜೆಯಾ ತಂಪಿನಲಿ ತೇಲಿರುವ ಭಾವಗಳೆ..
ಕಾಡದಿರಿ,ಬಾಡದಿರಿ, ರಾತ್ರಿಯಾಗಿಹುದೆಂದು.

ಮುಗ್ದತೆಯ ಮನಸಿನಲಿ ಮೂಡಿರುವ ನೀವು,
ದಗ್ದತೆಯ ಆಳವನು ಕೆದಕದಿರಿ ಇಂದು,
ಭಾಂದವ್ಯದ ಹೆಸರಿನಲಿ ಬಂದಿಸಿದ ಮನವೇ..
ತಣಿಸುವುದು ನಿಮ್ಮನ್ನು ಒಲವ ಧಾರೆಯ ಸುರಿದು.

ಹೊದೆಯಿರಿ ಬೆಚ್ಚನೆಯ ಭರವಸೆಯ ಹೊದಿಕೆ,
ಬೇಡ ನಿಮಗೆ ಇಂದೇ ಎಲ್ಲಾ ಸಾಧಿಸುವ ಬಯಕೆ,
ನಗುತಿಹನು ಚಂದ್ರಮನು..ನೋಡಿ ನಿಮ್ಮ ಅಸಹಾಯಕತೆ..
ಮಲಗಿ ಸುಮ್ಮನೆ,ಇರಲಿ ನಿಮ್ಮೊಳಗೆ ಆ ನಾಳೆಯಾಗುವದೆಂಬ ನಂಬಿಕೆ.

ನಿದ್ರೆ !!

ಭುವಿಯ ಹಾಸಿಗೆ, ಮುಗಿಲ ಚಾದರ..
ಹಳೆಯ ನೆನಪು, ಹೊಸ ಕಲ್ಪನೆ..
ಮುದ್ದಾದ ಕನಸು,ಮರೆಯಲಾಗದ ಘಟನೆ..
~~~~~~~~~~~~~~~~~~~~
ಇದೆಲ್ಲದರ ನಡುವೆ ನನ್ನ ನಿದ್ರೆ. J


Friday, November 13, 2009

ಭಾವ ಸಂಕೀರ್ಣ

ಹಗಲಿರುಳು ಕಂಪ್ಯೂಟರ ಮುಂದೆ ಕೂರುವ
ಜೀವವಿರುವ ಯಂತ್ರಕ್ಕೆ..
ಪ್ರೀತಿ-ಸ್ನೇಹದ ಮಧುರ ಭಾಂಧವ್ಯವೂ ಯಾತನೆಯಾಗಿ,
ಒಂಟಿತನದ ಹಿಂಸೆಯೇ ಮನಕ್ಕೆ ಮುದನೀಡುತ್ತದೆ.

ಜೀವ-ಭಾವವೆಲ್ಲ ಕೆಲಸಕ್ಕೆಂದೆ ಮೀಸಲಾಗಿರಲು..
ಸುಖ-ಶಾಂತಿ, ನೆಮ್ಮದಿಗಳು ಬತ್ತಿ ಹೋದ ಮರೀಚಿಕೆಗಳಾಗಿ,
ಹಾಡು-ಹಗಲಲ್ಲೆ ಏ/ಸಿ ರೂಮ್ ನಲ್ಲಿ ಹೊತ್ತಿ ಉರಿಯುತ್ತಿರುತ್ತವೆ.

Tuesday, November 10, 2009

Typical Mind Set!!!

Once I had been to shopping with my cousin in Jayanagar 4th block.

On the way we met a guy from my native. I spoke to him for a long time...also I introduced my cousin... We went to a nearby chat shop and had few snacks.

After that we left from there… finished the work and I reached back my hostel.

After 2 months …

I was waiting for my mom in bus stop in my native place . One lady came.

Suddenly she told me “ I heard that your marriage is fixed!!! “

Hey...Come on... I did not know that I am getting married yar!! :P

I was shocked and asked her... Who told her and with whom am I getting married?? Just a curiosity: P

She told me that she has heard it from someone...

I kept quiet and didn’t want to prolong this discussion…

But then she started asking me again, are u getting married and she started giving me advice like

..If the guy is of our caste then no problem and all…. blah blah blah…

I got irritated and asked her very seriously to tell me from whom she came to knew about my wedding.. To her luck the bus arrived and she left.

I was thinking.. How on earth this gossip would have originated

But later I realized that she is the mother of the guy whom I met in 4th block.

The big mistake I did was that I forgot to mention to him that he is my cousin brother.

Is it necessary that I have to tell all the details when I introduce someone?!!…Uffff….

Can’t we go out with brothers, cousins and friends?? !!!!!!!!!!!!!!!

Friday, November 6, 2009

Rewinding a funny moment !!

Bus travels are sometimes funny and memorable. There was one such incident and whenever I think of it, it reminds me how I made a bakra of myself and it brings back a smile on my face. So here I am sharing that with you.

I was going back from my college to my home. It was a normal afternoon and the bus was empty. I wanted to enjoy my silent time and chose a window seat. I kept my bag on the seat so that no one disturbs my silent moments…

But then a guy boarded the bus. I have seen him many times.. but didn’t get the urge to speak to him. May be he had the urge to speak to me ;-)

He came to me and asked whether he can occupy the seat next to me with a smile on his face….he wanted me to take my bag off…. …

I somehow didn’t want to leave my space. So, told him that my friends would come.

He went and sat in a different place. Few more people boarded the bus but no one sat next to meJ I was happy ;-)

But then again he came and asked whether he can sit now. I told him the same answer. He went back to his seat. Then the driver came. I was hoping that the driver takes the bus soon so that I can go back into my world of thoughts.

But to my amazement the guy told the driver that my friend has to come and asked the driver to wait for my friend’s arrival….what aaaaaaaaaaaaaaaaaaaaa boomerang? He knew that no one was coming J.

So I quietly took my bag off and he sat next to me L.

Wednesday, November 4, 2009

ಇದುವೆ ಸ್ನೇಹಾನಾ!!!ನಾಲ್ಕು ವರ್ಷದ PG life ನಲ್ಲಿ ಎಷ್ಟೊ ಹುಡುಗಿಯರು ಪರಿಚಯವಾಗಿದ್ದಾರೆ.. Working ಮತ್ತು Job search ಅಂತಾ ಬರೊರೆ ಜಾಸ್ತಿ.. ಯಾರೋ, ಎನೋ, ಎಲ್ಲಿಯವರೋ ಎನೂ ಗೊತ್ತಿರಲ್ಲ.. ಹೆಸರು,Qualification,Company....ಇವೇ ಇವರ Identification.. ಇದಕ್ಕೆ ಪೂರಕವಾಗಿ ಅವರ Dressing & ಅವರ ಮಾತು, ನಡತೆ .. We need to decide whether to make any relationship or to maintain distance.

After all, ಒಂದು ವೇಳೆ ಎಲ್ಲ OK ಅಯ್ತೊ ...Relationship starts... ಆಮೇಲೆ ನೋಡ್ಬೆಕು..ಎಷ್ಟೋ ವರ್ಷದ ಅತ್ನ್ಮೀಯ ಹಿತರೆನೋ ಅನ್ನುಬೇಕು..ಒಟ್ಟಿಗೆ ಊಟ, TV,ಹರಟೆ, Walking..ಎಲ್ಲಾ... ನಿಜವಾಗಿ ಇವರ ಬಗ್ಗೆ ಎನು ಗೊತ್ತಿರಲ್ಲ.. ಆದರೆ ಎಲ್ಲ ಗೊತ್ತಿರೊ ಹಾಗೆ ಅನ್ನಿಸುತೆ.. ಇದನ್ನ दिखावा ಅನ್ತಾನು ಕರೆಯೊಕೆ ಅಗಲ್ಲ.. ತುಂಬಾ ಸಲುಗೆ,ಒಡನಾಟ,ಕಿತ್ತಾಟ,ಕೂಗಟ,ವಾದ ವಿವಾದ..ಏನ್ ಕೆಳ್ತೀರ..Politics,Share Market ನಿಂದ ಆಡುಗೆ ಮನೆಯವರಿಗೆನ ಮಾತುಗಳು. ಅದರಲ್ಲೂ Especially Gossips.. Shopping in group..ಏಷ್ಟು ಚೆನ್ನಾಗಿರುತ್ತೆ ಗೊತ್ತಾ.. Wonderful, OWwwwsome !! I Really Miss It NOW!!

ಒಂದು ವಿಶೇಷವಾದ ಸಂಭಂದ.. We will never get it in Friendship,Family OR in Relatives.. ಒಂದು ಕಡೆ Safe, Secret..ಇನ್ನೊಂದು ಕಡೆ ಭಾವಗಳ ಸಮ್ಮೇಳನ ಅನ್ನಬಹುದೆನೊ. ಇವರೊಂದಿಗೆ ಮನಸ್ಸನ್ನ ಓಪೆನ್ ಅಗಿ ಬಿಚ್ಚಿಡಲು..ಬೇಕಾದ ಹಗೆ ವರ್ತಿಸಲು ಸಾಧ್ಯ..Friends ಇರಲಿ, Family OR Relatives..ಯಾರೊಂದಿಗು ಅಗಲ್ಲ.. ಅವರೆನು ಅನ್ದುಕೊತಾರೊ ಅನ್ನಿಸುತೆ..ಮಾತಡಬೇಕು ಅನಿಸಿದ್ರೆ ಮಾತಾಡೋದು ..ಬೇಡ ಅನಿಸಿದ್ರೆ ಎದ್ದು ಹೋಗೊದು.. ಏನೋ ಇಷ್ಟ ಅಗಲಿಲ್ವೊ Direct ಆಗಿ ಹೇಳಬಹುದು .. ತುಂಬ ಖುಷಿಯಾದ ದಿನ ಒಟ್ಟಿಗೆ Enjoy ಮಾಡಬಹುದು.. These people are least bothered for ..Who are you..What you do..What you think.. ತಾವಾಯ್ತು ತಮ್ಮ ಜೀವನಾ ಆಯ್ತು. Good Policy!!! ನಮಗೂ ಅಷ್ಟೇ ಎನೇ ಹೇಳೊಕು ಆತಂಕ,ಸಂಕೋಚ ಇರೊಲ್ಲ. Some times we share our secrets.. We are sure it's safe.. If at all not safe ಅಂದುಕೊಳ್ರಿ..ಯಾರಿಗೆ ಅನ್ತಾ ಹೆಳ್ತಾರೆ.. ಎನಂತ ಹೆಳ್ತಾರೆ!!! So don't Care ಆಗಿರ್ತಿವಿ.. ವಿಚಿತ್ರಾ..ಯಾರಿಗು ಯಾರ ಬಗ್ಗೇನು ಎನೂ ಸರಿಯಾಗಿ ಗೊತಿಲ್ಲ...!!

ಆವರ ಪ್ರೀತಿ, ಸ್ನೇಹ,ಎಲ್ಲ ತುಂಬಾನೆ ವಿಶೇಷ? ಎಲ್ಲಿದೀಯ? ಊಟಕ್ಕೆ ಯಾಕೆ ಬರಲಿಲ್ಲ.. ಯಕೊ ಸಪ್ಪಗೆ ಇದ್ದಿಯಲ್ಲ ಎನಾಯ್ತು ಹೇಳು...So Caring Character..ಬೆಜಾರ್ ಅಗಿಡ್ರೆ.. ಮನತಣಿಸುವ ಮಾತುಗಳು.. ಭಾವನೆ,ಅನಿಸಿಕೆ ,Past, Future,Our Dreams..ಎಲ್ಲಾನು ಇವರೊನ್ಡಿಗೆ ಮನಸ್ಸು ಬಿಚ್ಹಿ ಹೆಳ್ಕೊಬಹುದು. ನಮಗೆ ಬೇಕಾದ ಹಾಗೆ, ಆತ್ಮೀಯರಾಗಿ ಸ್ಪಂದಿಸುವ ಸಂಬಂದ.
We share our Childhood, Schoolings ,College life,Working life..What we Love.. What we hate... Almost everything.. ಹೇಳ್ಬೆಕುಅಂದ್ರೆ ಒಂಥರ "Counselling @ Free of Cost".. ಅವರೊಂದಿಗಿನ ಒಡನಾಟ ಹಿತವೆನಿಸುತ್ತೆ.. ಇವರೊಂದಿಗಿನ ಮಾತಾಡಿ ಮನಸ್ಸಿನಲ್ಲಿದಿರೊಡನ್ನೆಲ್ಲ ಹೆಳ್ಕೋಬೆಕು ಅಂತಾ ಮನ ಹಾತೊರೆಯುತ್ತೆ..

ಹೀಗೆ ಎಲ್ಲಾ ಚೆನ್ನಾಗಿ ನಡಿತಾ ಇರೊವಾಗ Suddenly ಈ ಸಂಭಂದ ವಿಚಿತ್ರವಾದ ಮುಕ್ತಾಯ ಕಂಡ್ಕೊಳ್ಳುತ್ತೆ.. ಊರಿಗೆ ಅಂತಾ ಹೊಗ್ತಾರೆ.. ವಾಪಸ್ ಬರೋದೆ ಇಲ್ಲ ಎನೋ ಕಾರಣ .. PG change ಮಾಡ್ತಾರೆ..Addres ಪತ್ತೆಯಿಲ್ಲ. ಆಕಸ್ಮಿಕವಾಗಿ Orkut ನಲ್ಲಿ ಸಿಗ್ತಾರೆ Status married.. Single photo. Phone number ಇರುತ್ತೆ ನಮ್ಮ ಹತ್ರ.. Try ಮಾಡಿದ್ರೆ "Invalid" ಅಂತ ಹೆಳುತ್ತೆ. But Not possible to forget them.. I wish I would meet them once in my life time..
ಹೇಳಿ ಇದನ್ನ ಸ್ನೇಹ ಅನ್ನೊಕಾಗುತ್ಯೆ?

ಏನೋ ಬರಿಯೋಣ ಅನಿಸುತ್ತೆ... ಆದ್ರೆ ಏನು ಬರೀಬೇಕು ಅಂತ ಗೊತಗ್ತಿಲ್ವಲ್ಲ!!!..

ಹೌದು ಏನೋ ಬರಿಯೋಣ ಅನಿಸುತ್ತೆ ಆದ್ರೆ ಏನು ಬರೀಬೇಕು ಅಂತ ಗೊತ್ತಾಗ್ತಾ ಇಲ್ಲ..
ಎಲ್ಲರು ತಮ್ಮ ಅನಿಸಿಕೆ, ಭಾವನೆಗಳನ್ನ,ಅನುಭವಗಳನ್ನ ಹಂಚಿಕೊತಾರೆ..
ಆದ್ರೆ ನನಗೆ ನನ್ನ ಸ್ನೇಹವನ್ನ ಬಿಟ್ಟು ಮತ್ತೇನು ಹಂಚಿಕೋಬೇಕು ಅಂತ ಅನ್ಸಿಲ್ಲ..

ಅನಿಸಿಕೆಗೆ ಪೂರಕವಾಗಿ ಪ್ರತಿಕ್ರಿಯೆ ಬೇಕು,ಭಾವನೆಗಳಿಗೆ ಬದುಕು ನೀಡುವವರು ಬೇಕು,ಅನುಭವಗಳನ್ನ ಅರಿಯುವವರು ಬೇಕು..
ಆದರೆ ಸ್ನೇಹಕ್ಕೆ ಬರಿ ಹ್ಞೂ ಹಾಕೋರು ಇದ್ದಾರೆ ಸಾಕು ಅಲ್ವ ಸ್ನೇಹಿತರೆ.