Sunday, August 1, 2010

ಸಂತೋಷ!!


ಕಿಟಕಿ ಸೀಟಲ್ಲಿ
ಒಬ್ಬನೇ ಕುಳಿತು,
ಕಲ್ಪನೆಯ ಲೋಕದಲ್ಲಿ
ವಿಹರಿಸುವುದರಲ್ಲಡಗಿದೆ!

ಮನೆಯಲ್ಲಿ ಬೈಯಿಸಿಕೊಂಡು
ಕಾಣಿಸದೆ ಕದ್ದುಮುಚ್ಚಿ,
ಬೀದಿಯಲ್ಲಿ ಪಾನಿಪುರಿ
ತಿನ್ನುವುದರಲ್ಲಡಗಿದೆ!

ಬೇಗ ಏಳಿಸಿದಾಗ
ಮತ್ತೆ ಮಲಗಬೇಕೆಂದಿನಿಸಿ,
ನೀರು ಕಾದಿಲ್ಲವೆಂದು
ನೆಪಹೇಳುವುದರಲ್ಲಡಗಿದೆ!

ಎಲ್ಲ ಚಹ ಕುಡಿಯುತ್ತಿರೆ,
ಬೇಗ ತಾ ಮುಗಿಸಿ,
ನಾ ಮೊದಲು
ಎನ್ನುವುದರಲ್ಲಡಗಿದೆ!

ಪ್ರಿಯತಮೆಯು ಪಕ್ಕಕ್ಕಿರೆ
ಬೀದಿಯಲ್ಲಿ ಹೋಗುವ,
ಹುಡುಗಿಯರ ಗಮನ
ತನ್ನದಾಗಿಸುವುದರಲ್ಲಡಗಿದೆ!

6 comments:

  1. ಶೋಭಾ..

    ಕವನ ಚೆನ್ನಾಗಿದೆ..
    ಅಭಿನಂದನೆಗಳು...



    ಯಾವಾಗಲೂ..
    ಸಂತೋಷ..
    ಬೇಕಿದ್ದರೆ..
    ಈ ...
    ಹುಡುಗನ..
    ಮದುವೆಯಾಗಬೇಕು.. !!!

    ReplyDelete
  2. kavana cholo iddu :) loved the second and third stanza :D

    ReplyDelete
  3. ಹೌದಾ .....? ಮಿಸ್ ಮಾಡ್ಕೊಂಡಿದ್ದೇನೆ.... ನಾನೂ ಟ್ರೈ ಮಾಡ್ತೇನೆ....ತುಂಬಾ ಚೆನ್ನಾಗಿದೆ ನಿಮ್ಮ ಕವನ..... ಧನ್ಯವಾದ, ತುಂಟತನದ ಕವನಕ್ಕೆ....

    ReplyDelete
  4. ನಿಮ್ಮ ಕವನ ಓದಿದ ಮೇಲೆ ನನಗನ್ನಿಸಿದ್ದಿಷ್ಟೇ





    ಸಂತೋಷಕೆ ...ಈ ಹಾಡು ಸಂತೋಷಕೆ ....
    ಎದೆಯಾಳದ ದುಃಖವನ್ನೇ ಸುತ್ತಿಬಳಸಿ ಹೇಳುವ ಈ ಕಾಲದಲ್ಲಿ ,ಸಂತೋಷವನ್ನೇ ತೆಗೆದುಕೊಂಡು ಅದರ ಬಗ್ಗೆಯೇ ಹೇಳುವುದು ಮನೆಗಳನ್ನೇ ಬಳಸಿ ಬಂಗಲೆ ಕಟ್ಟಿದಂತೆ..
    ನನಗನಿಸಿದ್ದನ್ನು ಹೇಳಿದ್ದೇನೆ ,ತಪ್ಪಾದರೆ ಕ್ಷಮಿಸಿ ...






    ಮನದ ಮಾತು ಹಂಚಿಕೊಂಡ ಸಂತೋಷದೊಂದಿಗೆ .....

    ReplyDelete
  5. ಇದು ಹಳೆಯ ನೆನಪುಗಳನ್ನು ಮತ್ತೆ ಚಿಗುರಿಸುವಂಥದ್ದು..!

    ReplyDelete