ಹರಿದು ಹೊಳೆಯಾಗಿ,
ಕರಗಿ ಮಣ್ಣಲ್ಲಿ ಕೊಳೆಯಾಗಿ,
ಕೆದಕಿ ಭಾವಗಳ ಕಹಿಯಾಗಿ,
ಕೂತಿಹುದು ಮನದಲ್ಲಿ ನೆನಪಾಗಿ!
ಮಾತು ಮೌನವಾಗಿ,
ಹೃದಯ ಕಲ್ಲಾಗಿ,
ಕೊರಗಿ ಕೊನೆಯಾಗಿ,
ಕಲೆತಿಹುದು ಕಣ್ಣಲ್ಲಿ ಕಂಬನಿಯಾಗಿ!
ನಗೆಯು ಹೊಗೆಯಾಗಿ,
ಪ್ರೀತಿ ನೋವಲ್ಲಿ ಸೆರೆಯಾಗಿ,
ಭಾರವಾದ ಅಲೆಯಾಗಿ,
ಅಪ್ಪಳಿಸುತಿಹುದು ಎದೆಯನ್ನು ಮಿಡಿತವಾಗಿ!
ಎದೆಯೊಳಗಿನ ಪದಗಳಿಗೆ ,ಶಬ್ದಗಳು ಎಷ್ಟಿದ್ದರೂ ಕಡಿಮೆ ಅಲ್ಲವೇ?....
ReplyDeleteಈ ಕವನದ ಆರಂಭಕ್ಕೆ ಕಾರಣ ಏನೋ ನಾ ಕಾಣೆ ,ಆದರೆ ಇದೊಂದು ನನ್ನ ಮನ ತಟ್ಟಿದ ಭಾವತೋರಣ ನನ್ನಾಣೆ ...
ವಂದನೆಗಳೊಂದಿಗೆ..